ಲೋಹಘರ್ ಗೇಟ್ ನಲ್ಲಿ ಉಪಸ್ಥಿತವಿರುವ ದುರ್ಗಿಯಾನ ಮಂದಿರ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ತಾಯಿ ದುರ್ಗೆಗೆ ಸಮರ್ಪಿಸಲಾಗಿದೆ. ಲಕ್ಷ್ಮೀನಾರಾಯಣ ಮಂದಿರ ಎಂದೂ ಕರೆಯಲ್ಪಡುವ ಈ ಧಾರ್ಮಿಕ ಕಟ್ಟಡವನ್ನು 20ನೇ ಶತಮಾನದಲ್ಲಿ ಹರಸಾಯಿಮಲ್ ಕಪೂರ್ ಅವರು ಗೋಲ್ಡನ್ ಟೆಂಪಲ್ ನ ಪ್ರತಿಕೃತಿಯಾಗಿ ಕಟ್ಟಿಸಿದರು. ಈ ಬೃಹತ್ ಮಂದಿರ ನಿರ್ಮಾಣದ ಅಡಿಪಾಯ ಹಾಕಿದವರು ಹಿರಿಯ ರಾಜಕೀಯ ಮುಖಂಡ ಹಾಗು ಸಮಾಜ ಸುಧಾರಕರಾಗಿದ್ದ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು. ಮಂದಿರದ ಸಂಕೀರ್ಣ ಹಲವು ಹಿಂದೂ ದೇವತೆಗಳಾದ ದುರ್ಗಾದೇವಿ, ಸೀತಾ ಮಾತಾ ಮತ್ತು ಹನುಮಂತನ ಪ್ರತಿಮೆಗಳನ್ನು ಒಳಗೊಂಡಿದೆ. ಈ ಮಂದಿರದ ಮಹತ್ವದ ಲಕ್ಷಣವೆಂದರೆ ಗೋಡೆಯ ಮೇಲೆ ಮಾತೆ ದುರ್ಗೆಯ ವಿವಿಧ ಅವತಾರವಿರುವ ನಾಜೂಕಿನ ಕೆತ್ತನೆಗಳು ಮತ್ತು ಇಲ್ಲಿರುವ ಅನೇಕ ಹಿಂದೂಗಳ ಪ್ರವಿತ್ರ ಗ್ರಂಥಗಳು. ಇದರ ಬಾಗಿಲುಗಳನ್ನು ಬೆಳ್ಳಿಯಿಂದ ತಯಾರಿಸಿಲಾಗಿದ್ದರಿಂದ ಇದನ್ನು ಸಿಲ್ವರ್ ಟೆಂಪಲ್ ಎಂದೂ ಕರೆಯುತ್ತಾರೆ. == ಉಲೇಖನಗಳು ==